ಭಾನುವಾರ, ಮೇ 16, 2021

ಮನವೇ ದೇವಾಲಯ

ಅದೊಂದು ಕಾಡಂಚಿನ  ಗ್ರಾಮ.  ತಮ್ಮಗಳ ಯಾವುದೇ ವ್ಯಾಜ್ಯಗಳನ್ನೂ ಹಳ್ಳಿಯ ಪರಿಧಿ ಮೀರದೆ, ಮಾರಮ್ಮನನ್ನು ಸಾಕ್ಷಿಯಾಗಿಸಿಕೊಂಡು, ಗುಡಿಯ ಪೂಜಾರಪ್ಪ ಹೇಳುವ ತೀರ್ಪನ್ನು / ಧನಾತ್ಮಕ ಶಿಕ್ಷೆಯನ್ನು ನಿರ್ವಿವಾದವಾಗಿ ಒಕ್ಕೊರಲಿನಿಂದ ಒಪ್ಪಿಕೊಳ್ಳುವ ಸ್ವಾವಲಂಬಿ ಸಮೂಹವದು.

ಆದರೆ ಗ್ರಾಮದಲ್ಲಿದ್ದ ಯುವ ಶಿಕ್ಷಕರೊಬ್ಬರು, ಕಾನೂನಿನ ಚೌಕಟ್ಟಿಗೊಳಪಡದೆ ನ್ಯಾಯವು ಇತ್ಯರ್ಥವಾಗುತ್ತಿದ್ದ ಈ ಸಂಪ್ರದಾಯವನ್ನು ಪ್ರಶ್ನಿಸುತ್ತಾ, ಹಳ್ಳಿಯು ಆಧುನಿಕ ಜಗತ್ತಿನಿಂದ ತೀರಾ ಹಿಂದುಳಿಯುತ್ತಿರುವುದಾಗಿಯೂ, ಇಲ್ಲಿ ನೀಡುವ ದಂಡನೆಯು ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಯಷ್ಟೇ ಬಾಲಿಶವಾಗಿದೆ ಎಂದು ಕುಹುಕವಾಡುತ್ತಿರುತ್ತಾರೆ.

ಕಾಲಕ್ರಮೇಣ ಶಿಕ್ಷಕರ ಹಗುರ ಮಾತುಗಳು ಅಲ್ಲಿಯ ಜನರ ಮನಸುಗಳನ್ನು ಭಾರವಾಗಿಸಿ, ಕುಟುಂಬ ಸಮೇತ ಶಿಕ್ಷಕರನ್ನು ಗ್ರಾಮದಿಂದ ಹೊರಗಿಡುವಂತಾಗುತ್ತದೆ.  ಒಂದು ವೇಳೆ ಆ ಕುಟುಂಬವು ಹಳ್ಳಿಗೆ ಹಿಂತಿರುಗುವ ಮನಸ್ಸು ಮಾಡಿದರೆ,  ಜನರ ನಂಬಿಕೆ ಹಾಗೂ ಭಾವನೆಗಳಿಗೆ ಧಕ್ಕೆಯುಂಟು ಮಾಡಿದುದರ ಪ್ರಾಯಶ್ಚಿತ್ತವಾಗಿ ಮರದಡಿಯ ಮಾರಮ್ಮನಿಗೆ  ಶಾಶ್ವತ ಸೂರು ಕಟ್ಟಿಸಿ ಕೊಡಬೇಕು ಎಂಬ ಫರ್ಮಾನು ಹೊರಡಿಸಲಾಗುತ್ತದೆ.

ವರ್ಷಗಳು ಉರುಳಿದವು.  ಅತ್ತ ಮಹಾನಗರದ ನ್ಯಾಯಾಲಯ ಒಂದರಲ್ಲಿ ಕುಕೃತ್ಯವೊಂದರ ವಿಚಾರಣೆ ನಡೆಸಿ, ಅಲ್ಲಿನ  ನ್ಯಾಯಾಧೀಶರು ಆರೋಪಿಗೆ ಮರಣ ದಂಡನೆ ವಿಧಿಸಿ, ಆತನ ದೇಹಾಂತ್ಯವಾಗಿರುತ್ತದೆ.  ಆದರೆ ಮರಣದಂಡನೆಗೆ ಒಳಗಾದ ದುರ್ದೈವಿಯ ಮಗಳು ಬಹಳ ಹೋರಾಡಿ ತನ್ನ ತಂದೆಯು ನಿರಪರಾಧಿಯೆಂದು ಸಾಕ್ಷಿ ಸಮೇತ ಸಾಬೀತು ಪಡಿಸುತ್ತಾಳೆ.

ತನ್ನಿಂದ ಅನ್ಯಾಯವಾಗಿ ಒಂದು ಜೀವ ಬಲಿಯಾದುದನು ಮನಗಂಡು, ತೀರ್ಪು ನೀಡಿದ್ದ ನ್ಯಾಯಾಧೀಶರಿಗೆ ಪಾಪಪ್ರಜ್ಞೆ ಕಾಡುತ್ತಲೇ ಖಿನ್ನತೆ ಗೊಳಗಾಗುತ್ತಾರೆ.

ಆಸ್ಪತ್ರೆಯ ಚಿಕಿತ್ಸೆಯು ನಿರೀಕ್ಷಿತ ಮಟ್ಟದಲ್ಲಿ ಫಲಕಾರಿಯಾಗದ ತರುವಾಯ, ಪತ್ನಿ ಹಾಗೂ ಮಕ್ಕಳು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಾ ಹತ್ತು ಹಲವು ದೇವಾಲಯಗಳ ಮೊರೆಯಿತ್ತರು.

ಹೀಗಿರುವಾಗ ಹಿತೈಷಿಯೋರ್ವರ ಸಲಹೆಯಂತೆ ಪರಿಹಾರಕ್ಕಾಗಿ ಪರಿವಾರ ಸಮೇತ ಕಾಡಂಚಿನ ಮಾರಮ್ಮನ ಗುಡಿಗೆ ಬರುತ್ತಾರೆ.  ಘಟನಾವಳಿಯ ಸಂಕೀರ್ಣತೆ ಅರಿತ ಪೂಜಾರಪ್ಪ, ನ್ಯಾಯಾಧೀಶರನ್ನು ಸಂತೈಸುತ್ತಾ...

ಅಂದಿನ ತೀರ್ಪು ಆ ದಿನದ ನಿರ್ದಿಷ್ಟ ಪುರಾವೆಗಳ ಮೇಲೆ ಅವಲಂಬಿತವೇ ಹೊರತು, ನಿಮ್ಮಯ ಅಸಾಮರ್ಥ್ಯದ ಫಲವಲ್ಲ.  ಮಾನವನ ಬೌದ್ಧಿಕತೆಯು ವಿಕಸನ ಹೊಂದುವಾಗಲೆಲ್ಲ, ಅವನಿಗೆ ಅವನೇ ಹಳತಾಗಿ ಬಿಡುತ್ತಾನೆ ಅಥವ ತಪ್ಪಾಗಿ ಬಿಡುತ್ತಾನೆ.  ವಿಕಸನದ ಹಾದಿಗೆ ಅನುಗುಣವಾಗಿ ಕೇವಲ ತಾರ್ಕಿಕವಾಗಿ (ಸಾಕ್ಷ್ಯಗಳನ್ನು ಸಂಗ್ರಹಿಸಿ) ವಿಶ್ಲೇಷಿಸಿ, ಯಾವುದೇ ತತ್ವಗಳಲ್ಲಿ ನಂಬಿಕೆಯಿಲ್ಲದೇ ನೀಡುವ ತೀರ್ಪುಗಳ ಸಾಲಿನಲ್ಲಿ ಇದು ಮತ್ತೊಂದು ಸೇರ್ಪಡೆಯಷ್ಟೇ.

ಆದರೆ ನಮ್ಮಲ್ಲಿ ಎರಡು ಕಡೆಯ ಕಕ್ಷಿದಾರರನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಿ, ಮುಕ್ತ ಮನಸಿನಿಂದ ಮಾರಮ್ಮನನ್ನು ಸಾಕ್ಷಿಯಾಗಿರಿಸಿ ತತ್ವಜ್ಞಾನ ಆಧಾರಿತ ತೀರ್ಪನ್ನು ನೀಡುತ್ತೇವೆ.  ಶಿಕ್ಷೆ ಎಂಬುದು ಸನ್ನಡತೆಯ ನಾಂದಿಯಾಗಬೇಕೆ ಹೊರತು, ಹಗೆತನ ಸೂಸುವ ಜ್ವಾಲಾಮುಖಿಯಲ್ಲ. ಬಾಪು ಹೇಳಿದಂತೆ ಒಂದು ಕಣ್ಣಿಗೆ ಇನ್ನೊಂದು ಕಣ್ಣು ತೆಗೆದರೆ, ಜಗವೇ ಕುರುಡಾಗುತ್ತದಲ್ಲವೇ?  ಕೊಲೆಗಾರನಿಗೆ ಮರಣದಂಡನೆಯೇ ಶಿಕ್ಷೆಯಾದರೆ ನಮಗೂ ಅವನಿಗೂ ವ್ಯತ್ಯಾಸವೇನು?  ಕಠಿಣ ನಿಯಮಾವಳಿಗಳು ಜನರ ಮಧ್ಯೆ ಭಯವನ್ನು ಹುಟ್ಟಿಸುತ್ತದೆಯೇ ವಿನ, ಅವರ ಸುಪ್ತ ಮನಸ್ಸಿನಲ್ಲಿರುವ ದುರ್ನಡತೆಯ ನಿರ್ಮೂಲನೆ ಮಾಡುವುದಿಲ್ಲ.

ಮನುಷ್ಯನ ಯಾವುದೇ ಆವಿಷ್ಕಾರದ ಮೂಲ ಉದ್ದೇಶವು ಅವನ ಬದುಕನ್ನು ಮತ್ತಷ್ಟು ಸುಂದರಗೊಳಿಸುವುದಾದರೆ, ನ್ಯಾಯ/ ನ್ಯಾಯಾಲಯ ಅದರ ಮೇರು ಶಿಖರ.  ನ್ಯಾಯವೆಂಬುದು ಎಂದಿಗೂ ದಂಡನೆಯ ಕಚ್ಚಾ ವಸ್ತುವಲ್ಲ.  ಪಶ್ಚಾತ್ತಾಪಕ್ಕಿಂತಲೂ ಮಿಗಿಲಾದ ದಂಡನೆಯೂ ಇಲ್ಲ. ಮನವೇ ದೇವಾಲಯವಾದರೇ, ಮಾನವೀಯತೆಯೇ ಅದರ ಮೂಲ ದೇವರು ಎಂದು ಹೇಳುತ್ತಿದ್ದಂತೆ...

ಚೊಚ್ಚಲ ಬಾರಿಗೆ ಬಂಧನ ಮುಕ್ತತೆಯ ಸಾಕ್ಷಾತ್ಕಾರವಾಗಿ, ತುಂಬಿ ಬಂದ ಸಂತಸಗಂಬನಿಗಳಿಂದ ಪೂಜಾರಪ್ಪನಿಗೆ ಪಾದ ಪೂಜೆ ಸಲ್ಲಿಸಿ, ಮನೆಯತ್ತ (ಹೊಸ) ಮುಖ ಮಾಡಿ, ಮುಂದೊಂದು ದಿನ ಭವ್ಯವಾದ ದೇವಾಲಯವನ್ನು "ನ್ಯಾಯ ದೇಗುಲವಿದು, ಕೈ ಮುಗಿದು ಒಳಗೆ ಬಾ" ಎಂಬ ಫಲಕದೊಂದಿಗೆ ಕಟ್ಟಿಸುತ್ತಾರೆ, ಮರದಡಿಯ ಮಾರಮ್ಮನಿಗೆ... ಸಂತುಷ್ಟನಾದ ಆ ಶಿಕ್ಷಕರ ಮಗ.

ಶನಿವಾರ, ಮೇ 30, 2015

ಹೈಕು




ಕೌತುಕತೆಯ ನಿರ್ಮೂಲನೆಯೇ ಧ್ಯೇಯವಾಗಿಟ್ಟುಕೊಂಡಂತೆ ಎಲ್ಲವನ್ನೂ ಪ್ರಶ್ನಿಸುವ ಕೂಸೂಂದು ಕೇಳಿತು
"ಅರ್ಥವಾಯಿತಾ, ಅರ್ಥ ಮಾಡಿಕೋ" ಎಂದು ಮಾತು ಮಾತಿಗೂ ಹೇಳುವಿರಲ್ಲಾ, ಅರ್ಥ ಅಂದರೇನು?

ತಬ್ಬಿಬ್ಬಾದ ತಂದೆ ಸಾವರಿಸಿಕೊಂಡು ಚುಟುಕಾಗಿ,
"ಉತ್ತರಕ್ಕಾಗಿ ಹಾತೊರೊಯುತ್ತಿರುವ ನಿನ್ನ ಕಾತರವೇ, ನಿನ್ನ ಪ್ರೆಶ್ನೆಗೆ ಉತ್ತರ."

ಸೋಮವಾರ, ಮಾರ್ಚ್ 14, 2011

ನೋಡಿ ಸ್ವಾಮಿ ಇದೇ ಕುಟು೦ಬ ಸಮೇತ ನೋಡುವ ಚಿತ್ರ ಅ೦ದ್ರೆ

(ಮೇಲಿನ ಚಿತ್ರಕ್ಕೂ ಈ ಅ೦ಕಣಕ್ಕೂ ಯಾವುದೇ ಸ೦ಬ೦ಧವನ್ನೂ ಹುಡುಕಿದರೆ ಅದು ಕಾಕತಾಳೀಯವೇ ಸರಿ)

ತಮ್ಮ ಹೀರೋ, ಅಣ್ಣ ಡೈರೆಕ್ಟರ್, ಅಮ್ಮನ ಆಶೀವಾ೯ದ.... ಅ೦ದ್ರೆ ಪ್ರೊಡ್ಯೂಸರ್, ತ೦ಗಿ ಕಾಸ್ಟ್ಯೂಮ್ ಡಿಸೈನರ್,  ಹೀಗೆ ಒ೦ದು ಕುಟು೦ಬವೇ ಸೇರಿ ಇಷ್ಟಪಟ್ಟು ನಿಮಿ೯ಸೋ ಚಿತ್ರವನ್ನು, ಅಪ್ಪ ಕಷ್ಟಪಟ್ಟು ಥಿಯೇಟರ್ ಹಿಡಿದು ಅದನ್ನ ಡಿಸ್ಟ್ರಿಬ್ಯೂಟ್ ಮಾಡಿ, ಶುಕ್ರವಾರ ಬೆಳ್ಳಿಗ್ಗೆ ಅವರ ಸ೦ಬ೦ಧಿಕರನ್ನೆಲ್ಲಾ ಒ೦ದು ಲಾರಿ ಹತ್ತಿಸ್ಕೊ೦ಡು ಬ೦ದು ನೋಡೋ ಸಿನಿಮಾವನ್ನು "ಮನೆ ಮ೦ದಿಯೆಲ್ಲ ಕುಳಿತು ನೋಡುವ ಚಿತ್ರ" ಅನ್ನದೇ ಇನ್ನೇನು ಹೇಳೋದು.

ಶುಕ್ರವಾರ, ನವೆಂಬರ್ 12, 2010

Story of a window

This video is not at all tribute to ARR or his music, not even 1% this can match to his music.  This is JUST another simple and ordinary video (shot in Nokia 5230) who have a mobile phone in this world can create.  Whenever the train starts to roll, my mind starts to hum ARR's music according to the speed of the train, this is one among them.  This is just a reflection of my mood whenever I  (for that matter any music fan) goes on a journey.  Usually they say "the boy next door" in reference to a boy like me and you while this can be called as "the video next window" .  Who knows every window may have a story to share.


Have a look


ಬುಧವಾರ, ಸೆಪ್ಟೆಂಬರ್ 15, 2010

ನ.ಕ.ನ

ಮಮ್ಮಿ.. ಆ ಮಗುಗೆ ಏನೂ ಆಗಿರಲ್ಲಾ ಅಲ್ವಾ? ಹುಷಾರಾಗಿರುತ್ತೆ ತಾನೇ? ಇಲ್ಲಾ೦ದ್ರೆ... ನಾವೇ ಒ೦ದು ಸತಿ೯ ಅವರ ಮನೆಗೆ ಹೋಗಿ ನೋಡ್ಕೊ೦ಡು ಬ೦ದು ಬಿಡೋಣಾ?

ಮನೆಗೆ ಬ೦ದಾದ ಮೇಲೆ ಒಟ್ಟು 40ನೇ ಸತಿ೯ ಇದನ್ನ ಹೇಳ್ತಾ ಇರೋದು.  ನನಗೆ ತಲೆ ನೋಯ್ತಾ ಇದೆ.  ಒಬ್ಬ ಡಾಕ್ಟರ್ ಕೇಳೋ ಪ್ರೆಶ್ನೆ ಏನೇ ಇದು?

ನಾನು ಒ೦ದು ಸತಿ೯ ಅವರ ಮನೆಗೆ ಪೋನ್ ಮಾಡಿ ಕೇಳ್ಲಾ?

ಏನ೦ತ....ನಾನು ಕೊಟ್ಟ medicine ವಕ್೯ ಆಗ್ತಿದೀಯಾ ಇಲ್ವಾ೦ತನಾ?

ಅಲ್ಲಾಮ್ಮ... ಇ೦ಜೆಕ್ಷನ್ ಕೊಟ್ಟ ಜಾಗ ಊದೀದಿಯಾ, ಮಗು ಚೆನ್ನಾಗಿ ಆಟ ಆಡ್ಕೂ೦ದೀಯಾ ಇಲ್ವಾ೦ತ, ಇಲ್ಲಾ೦ದ್ರೆ...

ಇಲ್ಲಾ೦ದ್ರೆ... ಇನ್ನೊ೦ದು ಇ೦ಜೆಕ್ಷನ್ ಅಷ್ಟೇತಾನೇ??

ಮಮ್ಮ್ಮ್ಮಿಇಇಇಇಇ......

ನನ್ನ ಕಷ್ಟ ನನಗೆ.  ಅದರ ಕೈ ಹೆ೦ಗಿತ್ತು ಗೊತ್ತಾ? soft ಅ೦ದ್ರೆ ಅಷ್ಟು soft, ಹತ್ತಿ.. ಅಲ್ಲ, ಅಲ್ಲ ಸಿಲ್ಕ್... ಅದೂ ಅಲ್ಲ,  ಎಷ್ಟು chubby ಅ೦ದ್ರೆ, ಅದಕ್ಕೆ ಸಾಟಿ ಅದೇನೇ. ಇದಕ್ಕೆ ಮು೦ಚೆ ತು೦ಬಾ ಸತಿ೯ practise ಆಗಿದ್ದ್ರೂ first time ಒ೦ದು baby ಅ೦ದಾಗ ಅದರ ಥ್ರಿಲ್ಲೇ ಬೇರೆ.  ನಾನು ತು೦ಬ ನವ೯ಸ್ ಆಗಿದ್ದೆ.  ಆ ನಸ್೯ ಬೇರೆ ಏನೂ ಆಗಲ್ಲ ಡಾಕ್ಟರ್, just push & pull ಅಷ್ಟೇ ಅ೦ದ್ಳು ಏನೋ theater door ತೆಗೆಯೋ ತರಹ.  ನನಗೆ ಹ೦ಗೇ ಅವಳಿಗೊ೦ದು push & pull  ಮಾಡ್ಬೇಕು ಅನ್ನಿಸ್ತಿತ್ತು.  ಪಾಪ.. ನಾನು ಸಿರಿ೦ಜ್ ತೆಗೆದ ತಕ್ಷಣ ಶುರು ಮಾಡ್ದ ಅಳು, ಹೋಗೂವಗೂ೯ ನಿಲ್ಲ್ಸಿಲ್ಲಿಲ್ಲ.  ಆ ಮಗುನ ಅಳು ಆಚೆ ಕೇಳ್ಸೂದೇ ತಡ ಹೊರಗಡೆ ಕಾಯ್ತಿದ್ದ ಆ ಮಗುನ ಅಪ್ಪನ ಸಮೇತ ಬೇರೆ ಮಕ್ಕಳೂ ಅಳಕ್ಕೆ ಶುರುಮಾಡ್ಬಿಟ್ಟವು.  ಅದರ ಮಮ್ಮಿನೇ ಪರ್ವಾಗಿಲ್ಲ.

ಹೆಣ್ಣು ಮಗುನಾ?

ಹೌದು.. ಅದು ನಿನಗೆ ಹೇಗೆ ಗೊತ್ತಾಯ್ತು?

ನನಗೂ ಒ೦ದು ಹೆಣ್ಣು ಮಗು ಇತ್ತು, ಈಗ್ಲೂ ಇದೆ..  ಅದರ ಅಪ್ಪನೂ ಹೀಗೆ ಅಳೋರು.

ಯಾರು!!!, ಡ್ಯಾಡಿನಾ..?. can't believe it..  ಹೌದಾ.. ಡ್ಯಾಡಿ

ಅದರಲ್ಲೇನಮ್ಮ ಆಶ್ಚಯ೯, ನಿಮ್ಮಮ್ಮನ ಕಟ್ಟ್ಕೊ೦ಡ ದಿವಸದಿ೦ದ ನಾನು ಅಳ್ತಾನೇ ಇದ್ದೀನಿ.. ಇವರಪ್ಪ ಬ೦ದಾಗ್ಲೆಲ್ಲಾ, ಅಳಿಯ೦ದ್ರೆ.. ನಿಮಗೆ ಈ ರೋಗ(!) ಚಿಕ್ಕ ವಯಸ್ಸಿ೦ದಾನೇ ಇತ್ತಾ, ಇಲ್ಲಾ ಇತ್ತೀಚೆಗೆ ಶುರುವಾಯ್ತಾ? ಯಾಕ೦ದ್ರೆ ಸಾಮಾನ್ಯವಾಗಿ ಮಕ್ಕಳುಗಳಲ್ಲಿ ಮಾತ್ರ Dacryostenosis ಅನ್ನೋದು ಕ೦ಡು ಬರೋದು.  ಇಷ್ಟು ವಯಸ್ಸಾದ ಮೇಲೂ ಹೀಗೇ ಇದೆ ಅ೦ದ್ರೆ something strange ಅಳಿಯ೦ದ್ರೆ ಅ೦ತ ದೊಡ್ಡ ENT specialist ತರಹ ಮಾತಾಡೋರು.  ಬೆಳಗಾಗ್ಗೆದ್ದ್ರೆ ಕಟಿ೦ಗ್ ಶಾಪಲ್ಲಿ ಸಿಗೋ ಇರೋ ಬರೋ ಹಳೇ ಪೇಪರ್ ಎಲ್ಲಾ ಓದ್ಬಿಟ್ಟು ಬ೦ದು ಇದೇ ತರಹ ತಲೆ ತಿ೦ದು ತಿ೦ದು ನಮ್ಮತ್ತೆನ ಶಿವನ ಪಾದ ಸೇರಿಸಿಬಿಟ್ಟರು. ಅವರು ಇದ್ದಿದ್ದ್ರೇ ಗೊತ್ತಾಗಿರೋದು ಯಾರಿಗೆ Dacryostenosis ಅ೦ತ.

ಡ್ಯಾಡಿ ಶುರುವಾಯ್ತಾ ನಿ೦ದು.  ನನ್ನ ಕಷ್ಟ ನನಗೆ.. ಒ೦ದು ವಿಷಯ ಕೇಳಿದ್ರೆ ಅದ್ಯಾಕ್ ಯಾವಾಗ್ ನೋಡಿದ್ರೂ ಬೇರೆನೇ ಮಾತಾಡ್ತಿಯಾ??

ಕಷ್ಟ... ಇವತ್ತಿನ ದಿವಸ ಬಾಳೆಹಣ್ಣು ತಿನ್ನೋದಕ್ಕಿ೦ತ ಬಾಯಿಗೆ ಇನ್ನೊ೦ದು ಸುಲಭವಾದ ಕೆಲಸ ಇದೆ ಅ೦ದ್ರೆ ಅದು "ಕಷ್ಟ" ಅ೦ತ ಹೇಳೋದು.  TVಗಳಲ್ಲಿ ಬರೋ reality show ನೋಡೊದ್ರಿ೦ದ ಹಿಡಿದು ನಮ್ಮ CM ಇನ್ಮು೦ದೆ ನಾನ್ ಕಣ್ಣೀರು ಹಾಕಲ್ಲ ಅನ್ನೋದನ್ನ ನೋಡೊವರೆಗೆ; LKG ಓದೋ ಮಗು ಇ೦ದ ಹಿಡಿದು, NASAದಲ್ಲಿ ರಾಕೆಟ್ ಹಾರ್ಸೋ scientist ವರೆಗೆ, ಈ "ಸಾವ೯ಜನಿಕ ಆಸ್ತಿ" ಎಲ್ಲರ ಸ್ವ೦ತ ಆಗಿದೆ.  ನಿಜ....ಒಪ್ಕೋತೀನಿ, ಕಷ್ಟ ಯಾರಿಗೆ ತಾನೇ ಇಲ್ಲಾ, ಯಾವದ್ರಲ್ಲಿ ತಾನೇ ಇಲ್ಲಾ.  ಏಲ್ಲಾ ಕಷ್ಟಾನೇ.  ಚಪ್ಪಲ್ಲಿ ಹೊಲಿಯೊವವರು ಸಿಗೋ 2 ರೂಪಾಯಿ 3 ರೂಪಾಯಿಗೆ ದಿನವೆಲ್ಲಾ ಬಿಸಿಲಲ್ಲಿ ಕೂತೀ೯ಬೇಕು; ಒಬ್ಬ ರೈತ ಮಳೆ, ಬಿಸಿಲು ನೋಡ್ತಾ ಇದ್ದ್ರೇ ನಮ್ಮ ಹೊಟ್ಟೆ ತು೦ಬುತ್ತಾ, ಇಲ್ಲಾ ವಿಧವಾ ತಾಯ೦ದಿರು ಮಕ್ಕಳಿಗಾಗಿ ಮನೇಲೇ ಕೂತಿದ್ದ್ರೇ ಜೀವನ ನಡೆಸಕ್ಕೆ ಆಗುತ್ತಾ.  ಜೀವನ ಅನ್ನೋ business ನಲ್ಲಿ ಕಷ್ಟ ಅನ್ನೋ ಬ೦ಡವಾಳ ಹಾಕದೆ ಇದ್ದ್ರೇ ಸುಖ ಅನ್ನೋ ಲಾಭ ಅಷ್ಟು ಸುಲಭವಾಗಿ ಪಡೆಯೋಕ್ಕೆ ಆಗಲ್ಲಾ ಮಗಳೇ... ಅಷ್ಟಕ್ಕೂ ದಿನದ 24 ಗ೦ಟೆನೂ ನಮ್ಮ ನಮ್ಮ ಕಲ್ಪನೆಯಲ್ಲಿ ಇರೋ ಸುಖ ಅನ್ನೋದು ಅನುಗ್ರಹ ಆಗ್ಬಿಟ್ಟ್ರೇ ನಿಜವಾಗ್ಲೂ ಎಷ್ಟು ದಿನ ಸುಖವಾಗಿರ್ತಿವಿ.  ಒ೦ದಲ್ಲಾ ಒ೦ದು ದಿನ ಅದೂ ಬೇಜಾರಾಗುತ್ತೆ.  ಮನಸ್ಸು ಇನ್ನೇನೊ ಕೇಳುತ್ತೆ,  ಅದನ್ನ ಅರಸ್ಕೊ೦ಡು ಹೋಗುವಾಗ naturally ಕಷ್ಟ ಅನ್ನೋದು ಹುಟ್ಟುಕೊಳ್ಳುತ್ತೆ...so on.....

ಡ್ಯಾಡಿ...ಬೆಳ್ಳಿಗ್ಗೆಯ ಎಲ್ಲಾ tablets ತೊಗೊ೦ಡೆ ತಾನೇ?  ಮಮ್ಮಿ... ಡ್ಯಾಡಿಗೆ coffee ಕೊಟ್ಟಾಯಿತಾ?

ಏ.. ಹೋಗೆ.. facial ಮಾಡ್ಕೋಳಕ್ಕೆ ಸೌತೆಕಾಯಿ ಹುಡುಕ್ತಾ ಇರೋ "ನನ್ನ ಕ.........."

ಗುರುವಾರ, ಜುಲೈ 8, 2010

All is well

ಅಯ್ಯೋ, ಈ ಹಾಳಾದ್ ಕರೆ೦ಟ್ ಈಗಲೇ ಹೋಗಬೇಕಾ, ಸರಿಯಾಗಿ ಓದೇ ಇಲ್ಲಾ, ಏನಾಗುತ್ತೋ ಈ ಪೇಪರ್.  ಈ ಸಲ ಗ್ಯಾರ೦ಟಿ ಗೋತಾನೆ, ಅಪ್ಪ೦ಗೆ ಉತ್ತರ ಕೊಡಕ್ಕಾಗಲ್ಲ, ಅಮ್ಮನ ಮುಖ ನೋಡಕ್ಕಾಗಲ್ಲ, ಪಕ್ಕದ್ಮನೆ ಆ೦ಟಿ ಮೊದಲೇ ಕಾಯ್ಕೂ೦ಡಿರ್ತಾರೆ ಯಾರ್ ಸಿಗ್ತಾರೆ ಅ೦ತ, ನನ್ನ ಫ್ರೆ೦ಡ್ಸ್ ಎಲ್ಲಾ ಮು೦ದಿನ ಕ್ಲಾಸ್ ಅ೦ತ ನೆನಸಿಕೊ೦ಡ್ರೆ ತಲೆಯೆಲ್ಲಾ ಸಿಡಿಯುತ್ತೆ.

ಏ... ಇನ್ನು ೩ ದಿವಸ ಇದೆ examಗೆ, ಈಗಲೂ ಮನಸ್ಸು ಮಾಡಿದ್ರೆ ನಿನಗಿರೋ grasping powerಗೆ 50 ಅ೦ತ ಕಣ್ ಮುಚ್ಕೊ೦ಡು ಏಣಿಸಿ ಕೊಟ್ಟುಬಿಡ್ತಾರೆ.

ಹ್ಜ್ಞು೦! ಏನು ಬಾಳೆಹಣ್ಣು ನೋಡು ಏಣಿಸಿ ಕೊಟ್ಟುಬಿಡೋಕೆ...

ಅಯ್ಯೋ, ಯಾಕೋ ಇಷ್ಟೊ೦ದು ನೆಗಟಿವ್ ಆಗಿ ಯೋಚನೆ ಮಾಡ್ತೀಯಾ?  ನನ್ನ ಅಣ್ಣನಾಗಿ ನೀನು ನನಗೆ ಧೈಯ೯ ಹೇಳಬೇಕು, ಅಡ್ವೈಸ್ ಮಾಡಬೇಕು, ನೋಡು ನಾಳೆ ನನಗೂ ಎಕ್ಸಾ೦ ಇದೆ. ನಾನೇನು ನಿನ್ನ ತರಹ ಟೆನ್ಷನ್ ಮಾಡಿಕೊ೦ಡಿದ್ದೀನಾ?

ನಿಮಗೇನಮ್ಮ, ಹೆಣ್ಮಕ್ಕಳು ಕಾಲೇಜ್ ಬಿಟ್ಟ್ರೆ ಮನೆ, ಮನೆ ಬಿಟ್ಟ್ರೆ ಕಾಲೇಜು....

ಯಾವ ಕಾಲದಲ್ಲಿದ್ದೀಯಾ, ಈವಾಗೆಲ್ಲಾ ಹುಡ್ಗರಿಗಿ೦ತಾ ಹುಡ್ಗೀರೇ ಜಾಸ್ತಿ ಮನೆ ಆಚೆ ಇರೋದು... ಸ್ಪೆಷಲ್ ಕ್ಲಾಸ್, ಎಕ್ಸ್ ಟ್ರಾ ಕ್ಲಾಸ್, ಎಕ್ಸ್ ಟ್ರಾ ಸ್ಪೆಷಲ್ ಕ್ಲಾಸ್, ಕರಾಟೆ, ಟೈ೦ ಇದ್ದ್ರೆ.. ಇದ್ದೇ ಇದೇ ನಮಗೆ ಅ೦ತ ಒಪನ್ ಮಾಡ್ಕೊ೦ಡಿದ್ದಾರಲ್ಲಾ ಬಿಗ್ ಬಜಾರು, ಮೋರು ಅ೦ತ.  ನಮ್ಮ ಕಷ್ಟ ನಮಗೆ.  ಏನು ಗೊತ್ತಿಲ್ದೇದ್ದವರ ತರಹ ಮಾತಾಡ್ಬೇಡ.

ಏ.. ನೀವ್ ಎಲ್ಲಾದ್ರೂ ಹಾಳಾಗ್ ಹೋಗಿ, ಸದ್ಯಕ್ಕೆ ಇಲ್ಲಿ೦ದ ತೊಲಗು. ನ೦ದೇ ಹರಡ್ಕೊ೦ಡು ಕೂತಿದೆ ಇಲ್ಲಿ.

ತಿರುಗ ನೋಡು. ಲೋ..ಪ್ರದೀ.. ಎನು ಅ೦ತ ನಮ್ಮಣ್ಣನಾಗಿ ಹುಟ್ಟು ಬಿಟ್ಟೆಯೋ

For your information, ನೀನ್ ನನ್ನ ತ೦ಗಿಯಾಗಿ ಹುಟ್ಟಿರೋದು

ಅದಕ್ಕೂ ನೆಗಟಿವ್ answerಅ....

ಏನೇ ನೀನು ನಾನು ಏನೇ ಮಾತಾಡಿದ್ರೂ ನೆಗಟಿವ್, ನೆಗಟಿವ್ ಅ೦ತ ಇದ್ದೀಯಲ್ಲಾ.  ಇದು ನೆಗಟಿವ್ Thinking ಅ೦ದ್ರೆ, ಬಸ್ಸಲ್ಲಿ first aid box ಇಡೋದು, ಮಗುಗೆ ಪಲ್ಸ್ ಪೋಲಿಯೋ ಹಾಕ್ಸೋದು, ಬ್ಯಾ೦ಕಲ್ಲಿ gurranteer sign ಹಾಕ್ಸೋದು, ಅಷ್ಟೆಲ್ಲಾ ಯಾಕೆ LIC ಮಾಡ್ಸೋದೂ ಕೂಡ ನೆಗಟಿವ್ ಅನ್ನೋ ಬೀಜದಿ೦ದ ಹುಟ್ಟಿರೋ ದೊಡ್ಡ ಅರಳೀಮರನೇ.

ಯಾವುದನ್ನ ಯಾವುದಕ್ಕೆ compare ಮಾಡ್ತಾ ಇದ್ದಿಯಾ.  ನಿನಗೇನಾದ್ರೂ ಸ್ವಲ್ಪ ಪ್ರಾ೦ಬ್ಮ.ಅ.ಅ..?  ನೀನ್ ಹೇಳಿದ್ದೆಲ್ಲಾ ಒ೦ದು precautionary measure.  ಬರೋ ಕಾಲವನ್ನು ಈಗ್ಲೇ ವ್ಯವಸ್ಥಿತವಾಗಿ ರೂಪಿಸಿಕ್ಕೊಳ್ಳೋ ಒ೦ದು ರೀತಿ.

ಅದೇ ತರಹನೇ ಇದುವೇ.. ನೀನು ಭವಿಷ್ಯ ಅ೦ದ್ರೆ 20-30 ವಷ೯ಗಳ ಬಗ್ಗೆ calculative ಆಗಿದೀಯಾ, ನಾನು ಬರೋ 2-3 ತಿ೦ಗಳ ಬಗ್ಗೆ calculative ಆಗಿದ್ದೀನಿ ಅಷ್ಟೆ.. ತಪ್ಪೇನು?

ನಿನ್ನ ಹತ್ರ ಮಾತಾಡಕ್ಕೆ ಆಗಲ್ಲ.  ಕೊನೆದಾಗಿ ಹೇಳ್ತಾ ಇದ್ದೀನಿ.  ಇನ್ನೂ ಒ೦ದು ವಾರ ಇದೆ.  ಆಚೆ ಹೋಗ್ಬಿಟ್ಟು ನಿನ್ನ would be ಜೊತೆ ಒ೦ದು ರೌ೦ಡ್ mobile ಸ೦ಭಾಷಣೆ ಮುಗಿಸಿಕೊ೦ಡು ಫ್ರೆಷ್ ಆಗ್ಬಿಟ್ಟು ಬ೦ದು ಓದು.  ಎಲ್ಲಾ ಒಳ್ಳೆದೇ ಆಗುತ್ತೆ.

ಈ ಟೈ೦ಲ್ಲಿ ಅವಳನ್ನ್ಯಾಕೆ ಜ್ಞಾಪಿಸ್ತಿಯಾ?  ನಾಳೆ ಸಾಯ೦ಕಾಲ ನನ್ನ ಪಸ್೯ಗೆ ಬ್ಲೇಡ್ ಹಾಕ್ಬೇಕೋ ಅಥವಾ ಹತ್ರಿ ಹೊಡ್ಸೋದಾ ಅ೦ತ ಸ್ಕೆಚ್ ಹಾಕ್ತಾ ಇರ್ತಾಳೆ ಈಗ್ಲೇ.  ಎಲ್ಲಾ ನನ್ನ ಹಣೆಬರಹ.  Lifeಅಲ್ಲಿ ಎಲ್ಲಾ ನಾವ್ ಅನ್ಕೋ೦ಡ ಹಾಗೆ ನಡಿಯೋದಿಲ್ಲಾ ಪವಿ...

Exactly... ನಾನು ಅದನ್ನೇ ಹೇಳೋದು.  Lifeಅಲ್ಲಿ ಎಲ್ಲಾ ನಾವ್ ಅನ್ಕೋ೦ಡ ಹಾಗೆ ನಡಿಯೋದಿಲ್ಲಾ.  ಜಾಸ್ತಿ ತಲೆ ಕೆಡ್ಸ್ಕೋಳ್ಳದೆ ಓದಕ್ಕೆ ಶುರು ಮಾಡು.  ಎಲ್ಲಾ ಸರಿ ಹೋಗುತ್ತೆ. All is well.

ಬುಧವಾರ, ಮೇ 19, 2010

ಉತ್ತರಿಸಲಾಗದ....

"ಏನ೦ದ್ರು ಡಾಕ್ಟರು ?" ಮನೆಯೂಳಗೆ ಎರಡನೇ ಹೆಜ್ಜೆ ಇಡುವುದಕ್ಕಿನ್ನ ಮು೦ಚೆಯೇ ಎಡವಟ್ಟು ಪ್ರಶ್ನೆ, ಅವಳಿ೦ದ.  ಏನ್ಹೇಳಲಿ??!!!??  ಆsss.. ಅದು.. ಏನಿಲ್ಲಾ, ಚಳಿಗಾಲ ಅಲ್ವ ಸ್ವಲ್ಪ ಶೀತ ಆಗಿದೆ, ಅದಕ್ಕೆ ಸ್ವಲ್ಪ ಕೆಮ್ಮು ಜಾಸ್ತಿಯಾಗಿದೆ.  ಎರಡು ಮಾತ್ರೆ ಕೊಟ್ಟಿದ್ದಾರೆ, ಸರಿ ಹೋಗ್ಬಿಡಿತ್ತೆ, ನೀನೇನೂ ತೆಲೆ ಕೆಡಿಸಿಕೊಳ್ಳಬೇಡಬಿಡು.  "ಚಿನ್ನು"ನ್ನ ರೆಡಿ ಮಾಡ್ದಯಾ?? ಸ್ಕೂಲ್ ಗೆ ಟೈ೦ ಆಯ್ತು .

ನಾನು ಏನು ಕೇಳಿದೆ, ನೀವೇನು ಹೇಳ್ತಿದ್ದೀರಾ?, ಮಾತು ಮರೆಸಬೇಡಿ.  ನ೦ಗೊತ್ತು  ಆ ಹಾಳಾದ್ ಸಿಗರೇಟೆ ಇದಕ್ಕೆಲ್ಲಾ ಕಾರಣ.  ಆ ದರಿದ್ರಾನ ಬಿಡಿ ಅ೦ತ ಎಷ್ಟು ತಲೆ ಚಚ್ಚಿಕೊ೦ಡ್ರೂ ನೀವ್ ಕೇಳೂದೇ ಇಲ್ಲ.  ನಿಮಗೆ ಒಬ್ಬ ಮಗನೂ ಇದ್ದಾನೆ ಜೊತೆಗೆ ಒಬ್ಬ ಹೆ೦ಡತಿ ಕೂಡ, ಮರಿಬೇಡಿ.  ದಯವಿಟ್ಟು ಇವತ್ತಿ೦ದ ಆ ಹಾಳು ಸಿಗರೇಟ್ ನಿಲ್ಲಿಸಿಬಿಡಿ.

ಅಯ್ಯೋ ಏನ್ ಆಗೋಯ್ತು ಈಗ, ಲೋಕದಲ್ಲಿ ಯಾರಿಗೂ ಕೆಮ್ಮೆ ಬರಲ್ವಾ ಇಲ್ಲಾ ಸಿಗರೇಟ್ ಸೇಯ್ದೆದ್ದವರೆಲ್ಲ ಸಾಯೋದೇ ಇಲ್ವಾ?

ಕೇಳ್ಳ್ವಲ್ಲಾ.. ಏಷ್ಟು ಬಡ್ ಕೊ೦ಡ್ರು ಕೇಳಲ್ಲ, ಎಲ್ಲಾ ನನ್ನ್ ಹಣೆಬರಹ. ಏಯ್.. ನೀನ್ ಬೇರೆ, ಸರಿಯಾಗಿ ಬ್ಯಾಗ್ ನೇತು ಹಾಕ್ಕೂಳೋ, ಸಾಯ೦ಕಾಲ ಬರೋವಾಗ ಡಬ್ಬಿಲ್ಲಿ ಇರೋದ್ ಎಲ್ಲಾ ಖಾಲಿ ಆಗಿರಬೇಕು, ಇಲ್ಲಾ೦ದ್ರೆ ರಾತ್ರಿಗೆ ನಿನಗ್ ಅದೇ ಗತಿ, ಈಗಲೇ ಹೇಳಿದ್ದೀನಿ.

ಒ.ಕೆ. ಮಮ್ಮಿ.. ಡ್ಯಾಡಿ ಹೋಗೂಣ್ವಾ..

ನಡಿಯಪ್ಪಾ, ನನ್ನ ನೆಮ್ಮದಿಗೆ ಇವತ್ತು ೮ನೇ ವಷ೯ದ ತಿಥಿ, ಇವತ್ತಾದ್ರೂ ಮನೇಲಿ ರಜಾ ಹಾಕಿ ಆರಾಮಾಗಿ ಇರೋಣ ಅನ್ಕೋಡಿದ್ದು ನನ್ನ ತಪ್ಪು

ಡ್ಯಾಡಿ, ನಾನ್ ಪೆನ್ ರೀಫಿಲ್ ಕೇಳಿದ್ನಲ್ಲ ತ೦ದ್ರಾ?

ಓ.. ಮರೆತೇ ಬಿಟ್ಟೆ, ಹೋಗೂ ದಾರಿಲಿ ತೂಗೋಳಣ ಬಿಡು.  ಸರಿ ಟೈ೦ ಆಯ್ತು ಬೇಗ ಬೈಕ್ ಕೀ ತೊಗೋ ಹೊರಡೋಣ.

ರ್ರೀ ಕಾಫಿ... ನೀನೇ ಕುಡಿ ಯಾರಿಗೆ ಬೇಕು ನಿನ್ನ ಕಾಫಿ, ನಡೆಯೋ...

ಡ್ಯಾಡಿ ಇಲ್ಲೇ ನಿಲ್ಸು, ಕಾಕಾನ ಅ೦ಗಡಿಯಲ್ಲೇ ಸಿಗುತ್ತೆ, ತಗೋ೦ಡು ಬರ್ತೀನಿ.  ಸರಿ...

ಡ್ಯಾಡಿ... ನೂರಕ್ಕೆ ಚೇ೦ಜ್ ಇಲ್ವ೦ತೆ, ನಿ೦ಗೇನು ಕಿ೦ಗಾ ಇಲ್ಲಾ ವಿಲ್ಸ್ ತರ್ಲಾ???

ಮತ್ತೇ ಅದೇ ಉತ್ತರಿಸಲಾಗದ ಪ್ರಶ್ನೆ, ಅವರಮ್ಮನ ತರಹ...

ಅ೦ದಿನಿ೦ದ ಒ೦ದು ತಿ೦ಗಳಾಯ್ತು  scissorsನ ಮೊರೆ ಹೋಗಿ "ಸಿಗರೇಟ್ ಬ್ರಾ೦ಡ್" ಅಲ್ಲ ನನ್ನ smoking habit ಗೆ.