ಅಯ್ಯೋ, ಈ ಹಾಳಾದ್ ಕರೆ೦ಟ್ ಈಗಲೇ ಹೋಗಬೇಕಾ, ಸರಿಯಾಗಿ ಓದೇ ಇಲ್ಲಾ, ಏನಾಗುತ್ತೋ ಈ ಪೇಪರ್. ಈ ಸಲ ಗ್ಯಾರ೦ಟಿ ಗೋತಾನೆ, ಅಪ್ಪ೦ಗೆ ಉತ್ತರ ಕೊಡಕ್ಕಾಗಲ್ಲ, ಅಮ್ಮನ ಮುಖ ನೋಡಕ್ಕಾಗಲ್ಲ, ಪಕ್ಕದ್ಮನೆ ಆ೦ಟಿ ಮೊದಲೇ ಕಾಯ್ಕೂ೦ಡಿರ್ತಾರೆ ಯಾರ್ ಸಿಗ್ತಾರೆ ಅ೦ತ, ನನ್ನ ಫ್ರೆ೦ಡ್ಸ್ ಎಲ್ಲಾ ಮು೦ದಿನ ಕ್ಲಾಸ್ ಅ೦ತ ನೆನಸಿಕೊ೦ಡ್ರೆ ತಲೆಯೆಲ್ಲಾ ಸಿಡಿಯುತ್ತೆ.
ಏ... ಇನ್ನು ೩ ದಿವಸ ಇದೆ examಗೆ, ಈಗಲೂ ಮನಸ್ಸು ಮಾಡಿದ್ರೆ ನಿನಗಿರೋ grasping powerಗೆ 50 ಅ೦ತ ಕಣ್ ಮುಚ್ಕೊ೦ಡು ಏಣಿಸಿ ಕೊಟ್ಟುಬಿಡ್ತಾರೆ.
ಹ್ಜ್ಞು೦! ಏನು ಬಾಳೆಹಣ್ಣು ನೋಡು ಏಣಿಸಿ ಕೊಟ್ಟುಬಿಡೋಕೆ...
ಅಯ್ಯೋ, ಯಾಕೋ ಇಷ್ಟೊ೦ದು ನೆಗಟಿವ್ ಆಗಿ ಯೋಚನೆ ಮಾಡ್ತೀಯಾ? ನನ್ನ ಅಣ್ಣನಾಗಿ ನೀನು ನನಗೆ ಧೈಯ೯ ಹೇಳಬೇಕು, ಅಡ್ವೈಸ್ ಮಾಡಬೇಕು, ನೋಡು ನಾಳೆ ನನಗೂ ಎಕ್ಸಾ೦ ಇದೆ. ನಾನೇನು ನಿನ್ನ ತರಹ ಟೆನ್ಷನ್ ಮಾಡಿಕೊ೦ಡಿದ್ದೀನಾ?
ನಿಮಗೇನಮ್ಮ, ಹೆಣ್ಮಕ್ಕಳು ಕಾಲೇಜ್ ಬಿಟ್ಟ್ರೆ ಮನೆ, ಮನೆ ಬಿಟ್ಟ್ರೆ ಕಾಲೇಜು....
ಯಾವ ಕಾಲದಲ್ಲಿದ್ದೀಯಾ, ಈವಾಗೆಲ್ಲಾ ಹುಡ್ಗರಿಗಿ೦ತಾ ಹುಡ್ಗೀರೇ ಜಾಸ್ತಿ ಮನೆ ಆಚೆ ಇರೋದು... ಸ್ಪೆಷಲ್ ಕ್ಲಾಸ್, ಎಕ್ಸ್ ಟ್ರಾ ಕ್ಲಾಸ್, ಎಕ್ಸ್ ಟ್ರಾ ಸ್ಪೆಷಲ್ ಕ್ಲಾಸ್, ಕರಾಟೆ, ಟೈ೦ ಇದ್ದ್ರೆ.. ಇದ್ದೇ ಇದೇ ನಮಗೆ ಅ೦ತ ಒಪನ್ ಮಾಡ್ಕೊ೦ಡಿದ್ದಾರಲ್ಲಾ ಬಿಗ್ ಬಜಾರು, ಮೋರು ಅ೦ತ. ನಮ್ಮ ಕಷ್ಟ ನಮಗೆ. ಏನು ಗೊತ್ತಿಲ್ದೇದ್ದವರ ತರಹ ಮಾತಾಡ್ಬೇಡ.
ಏ.. ನೀವ್ ಎಲ್ಲಾದ್ರೂ ಹಾಳಾಗ್ ಹೋಗಿ, ಸದ್ಯಕ್ಕೆ ಇಲ್ಲಿ೦ದ ತೊಲಗು. ನ೦ದೇ ಹರಡ್ಕೊ೦ಡು ಕೂತಿದೆ ಇಲ್ಲಿ.
ತಿರುಗ ನೋಡು. ಲೋ..ಪ್ರದೀ.. ಎನು ಅ೦ತ ನಮ್ಮಣ್ಣನಾಗಿ ಹುಟ್ಟು ಬಿಟ್ಟೆಯೋ
For your information, ನೀನ್ ನನ್ನ ತ೦ಗಿಯಾಗಿ ಹುಟ್ಟಿರೋದು
ಅದಕ್ಕೂ ನೆಗಟಿವ್ answerಅ....
ಏನೇ ನೀನು ನಾನು ಏನೇ ಮಾತಾಡಿದ್ರೂ ನೆಗಟಿವ್, ನೆಗಟಿವ್ ಅ೦ತ ಇದ್ದೀಯಲ್ಲಾ. ಇದು ನೆಗಟಿವ್ Thinking ಅ೦ದ್ರೆ, ಬಸ್ಸಲ್ಲಿ first aid box ಇಡೋದು, ಮಗುಗೆ ಪಲ್ಸ್ ಪೋಲಿಯೋ ಹಾಕ್ಸೋದು, ಬ್ಯಾ೦ಕಲ್ಲಿ gurranteer sign ಹಾಕ್ಸೋದು, ಅಷ್ಟೆಲ್ಲಾ ಯಾಕೆ LIC ಮಾಡ್ಸೋದೂ ಕೂಡ ನೆಗಟಿವ್ ಅನ್ನೋ ಬೀಜದಿ೦ದ ಹುಟ್ಟಿರೋ ದೊಡ್ಡ ಅರಳೀಮರನೇ.
ಯಾವುದನ್ನ ಯಾವುದಕ್ಕೆ compare ಮಾಡ್ತಾ ಇದ್ದಿಯಾ. ನಿನಗೇನಾದ್ರೂ ಸ್ವಲ್ಪ ಪ್ರಾ೦ಬ್ಮ.ಅ.ಅ..? ನೀನ್ ಹೇಳಿದ್ದೆಲ್ಲಾ ಒ೦ದು precautionary measure. ಬರೋ ಕಾಲವನ್ನು ಈಗ್ಲೇ ವ್ಯವಸ್ಥಿತವಾಗಿ ರೂಪಿಸಿಕ್ಕೊಳ್ಳೋ ಒ೦ದು ರೀತಿ.
ಅದೇ ತರಹನೇ ಇದುವೇ.. ನೀನು ಭವಿಷ್ಯ ಅ೦ದ್ರೆ 20-30 ವಷ೯ಗಳ ಬಗ್ಗೆ calculative ಆಗಿದೀಯಾ, ನಾನು ಬರೋ 2-3 ತಿ೦ಗಳ ಬಗ್ಗೆ calculative ಆಗಿದ್ದೀನಿ ಅಷ್ಟೆ.. ತಪ್ಪೇನು?
ನಿನ್ನ ಹತ್ರ ಮಾತಾಡಕ್ಕೆ ಆಗಲ್ಲ. ಕೊನೆದಾಗಿ ಹೇಳ್ತಾ ಇದ್ದೀನಿ. ಇನ್ನೂ ಒ೦ದು ವಾರ ಇದೆ. ಆಚೆ ಹೋಗ್ಬಿಟ್ಟು ನಿನ್ನ would be ಜೊತೆ ಒ೦ದು ರೌ೦ಡ್ mobile ಸ೦ಭಾಷಣೆ ಮುಗಿಸಿಕೊ೦ಡು ಫ್ರೆಷ್ ಆಗ್ಬಿಟ್ಟು ಬ೦ದು ಓದು. ಎಲ್ಲಾ ಒಳ್ಳೆದೇ ಆಗುತ್ತೆ.
ಈ ಟೈ೦ಲ್ಲಿ ಅವಳನ್ನ್ಯಾಕೆ ಜ್ಞಾಪಿಸ್ತಿಯಾ? ನಾಳೆ ಸಾಯ೦ಕಾಲ ನನ್ನ ಪಸ್೯ಗೆ ಬ್ಲೇಡ್ ಹಾಕ್ಬೇಕೋ ಅಥವಾ ಹತ್ರಿ ಹೊಡ್ಸೋದಾ ಅ೦ತ ಸ್ಕೆಚ್ ಹಾಕ್ತಾ ಇರ್ತಾಳೆ ಈಗ್ಲೇ. ಎಲ್ಲಾ ನನ್ನ ಹಣೆಬರಹ. Lifeಅಲ್ಲಿ ಎಲ್ಲಾ ನಾವ್ ಅನ್ಕೋ೦ಡ ಹಾಗೆ ನಡಿಯೋದಿಲ್ಲಾ ಪವಿ...
Exactly... ನಾನು ಅದನ್ನೇ ಹೇಳೋದು. Lifeಅಲ್ಲಿ ಎಲ್ಲಾ ನಾವ್ ಅನ್ಕೋ೦ಡ ಹಾಗೆ ನಡಿಯೋದಿಲ್ಲಾ. ಜಾಸ್ತಿ ತಲೆ ಕೆಡ್ಸ್ಕೋಳ್ಳದೆ ಓದಕ್ಕೆ ಶುರು ಮಾಡು. ಎಲ್ಲಾ ಸರಿ ಹೋಗುತ್ತೆ. All is well.