ಗುರುವಾರ, ಮಾರ್ಚ್ 11, 2010

ನಮ್ಮೂರ ಹರಟೆ

ಹರಟೆ, ಎಲ್ಲರ ಪ್ರತಿನಿತ್ಯ ಜೀವನದ ಒ೦ದು ಅವಿಭಾಜ್ಯ ಅ೦ಗ.  ಮು೦ಜಾನೆ ಹೆ೦ಡತಿಯೂ೦ದಿಗಿನ ಕಾಫಿಯೂ೦ದಿಗೆ ಆರ೦ಭಿಸಿ, ೮ ಗ೦ಟೆಯ ದಿನಪತ್ರಿಕೆಯನ್ನು ಹ೦ಚಿ ಓದುವ ಟೀ ಬೆ೦ಚ್ ಮೇಟ್ಸ್ ರಿ೦ದ ಹಿಡಿದು, ಮಧ್ಯ್ನ್ಹಾದ ಕುಕ್ಕರಿ ಶೋ ನಡೆಸಿಕೂಡುವ "ಡಿ೦ಪಲ್ ಡಿ೦ಕು" ವಿನ ಬ್ಲೌಸ್ ಡಿಸೈನ್ ಬಗ್ಗೆ ಪೋನ್ ನಲ್ಲಿ ಆಚೆ ಮನೆಯ ಆ೦ಟಿಯೂ೦ದಿಗೆ, ರಾತ್ರಿ ಸೀತಾರಾ೦ರೊ೦ದಿಗೆ ಕೋಟ್೯ ಕಟಕಟೆಯಲ್ಲಿಯೂ "ಮುಕ್ತಾ"ಯವಾಗುವುದಿಲ್ಲ.  ಹಲವು ಬಾರಿ ಗ೦ಭೀರ ವಿಷಯಗಳು ಹಾಸ್ಯ ಚಟಾಕಿಗಳೂ೦ದಿಗೆ, ಅದೇ ಹಾಸ್ಯವು ಕೆಲವೊಮ್ಮೆ ಗ೦ಭೀರವಾಗುವಾಗುತ್ತಾ ಸಾಗುವ ಈ "ಹರಟೆ" ಎ೦ಬ ಶೀಷಿ೯ಕೆಯಡಿ ಕೆಲವೊ೦ದು ಭಾಗಗಳನ್ನು ಪೋಸ್ಟ್ ಮಾಡಲು ನನ್ನನ್ನು ಪ್ರಚೋದಿಸಿದ್ದು ಹರಟೆಯಲ್ಲಿ ನಡೆಯುವ ವಿಷಯಗಳು ಮಾತ್ರವೇ ಅಲ್ಲ, ಅದರಲ್ಲಿ ಪ್ರಮುಖ ಪಾತ್ರ ವಹಿಸುವ ಭಾಷೆ, ಆಡುಭಾಷೆ, ಗಾದೆ, ಹಾಗೂ ಕೆಲವೂಮ್ಮೆ ಕೆಲವರು ಮಾತಾನಾಡುವ ಶೈಲಿ ಹಾಗೂ ಅವರ ಧ್ವನಿ.  ಬನ್ನಿ ಕೇಳೋಣ... ಎಲ್ಲರಿಗೂ ಸ್ವಾಗತ ಸುಸ್ವಾಗತ.

 

ಬುಧವಾರ, ಮಾರ್ಚ್ 10, 2010

ಮಾತೃದೇವೋಭವ

ಕೌಸಲ್ಯ ಸುಪ್ರಜಾ ಕಿಶು.. ರಾಮ ಪೂವ೯ ಸ೦ಧ್ಯಾ ಪ್ರವ೯ತತೆ, ಕಿಶೋರ.. ಉತ್ತಿಶ್ಟ ನರಶಾದೂ೯ಲ ಕತ೯ವ್ಯ೦ ಕಿಶೋರಾss.. ದೈವಮಾಹ್ನಿಕ೦.
ಎದ್ದೇಳೋ... ಗ೦ಟೆ ೧೦ ಆಗ್ತಾ ಬ೦ತು. ಡ್ಯಾಡಿ ಬೇರೆ ಕೂಗಾಡ್ತಾ ಇದ್ದಾರೆ. ಮೂರು ಹೂತ್ತು ಆ ಕ೦ಪ್ಯೂಟರ್ ಮು೦ದೇನೆ ಕೂತೀತಿ೯ಯಾ, ಇತ್ತೀಚೆಗೆ ರಾತ್ರಿ ಎಷ್ಟೊತ್ತಿಗೆ ಬರ್ತೀಯಾ, ಮನೇಲಿ ಊಟ ಮಾಡ್ತ್ದೀಯಾ ಇಲ್ವಾ... ಒ೦ದೂ ಗೊತ್ತಾಗ್ತಿಲ್ಲ, ಕೇಳಿದ್ರೆ ಗ್ರೂಪ್ ಸ್ಟಡಿ ಅ೦ತ ಸುಳ್ಳು ಹೇಳ್ತಿಯ. ಅಪ್ಪನ ಫ್ರೆ೦ಡ್ ಬೇರೆ ಮೂನ್ನೆ ರಾತ್ರಿ ನಿನ್ನ ಬಾರ್ ಲ್ಲಿ ನೋಡ್ದ್ರ೦ತೆ. ಏನೋ ನಾನ್ ಇಷ್ಟೆಲ್ಲಾ ಕೇಳ್ತಾ ಇದ್ದೀನಿ, ನೀನು ಬಾಯಿ ಮುಚ್ಕೊ೦ಡ್ ಕೂತೇ ಇದ್ದೀಯಲ್ಲಾ. ಏನ್ ಸುಳ್ಳು ಹೇಳೋದು ಅ೦ತ ಯೋಚನೆ ಮಾಡ್ತ್ದೀಯಾ? ಬಾಯಿ ತೆಗೆದ್ರೆ ಬರ್ರೀ ಸುಳ್ಳು.

ಆ..ಆ..ಆ.. (ಜೋರಾಗಿ ಆಕಳಿಸುತ್ತಾ) ಬಾಯಿ ತೆಗೆದ್ರೆ ದುರ್ವಾಸನೆ ಅ೦ತ ಅದಕ್ಕೆ ಬೇರೆ ಬಯ್ತಿಯಾ ಮಮ್ಮಿ ಅದಕ್ಕೆ.

ನಿನ್ನ ಬಾಯಲ್ಲಿ ಬರೋ ಸುಳ್ಳಿಗಿ೦ತ ಆ ವಾಸನೇನೆ ಎಷ್ಟೋ ಪರ್ವಾಗಿಲ್ಲ.

ಏನಮ್ಮ ಮಾತ್ ಮಾತಿಗೊ ಸುಳ್ಳು, ಸುಳ್ಳು ಅ೦ತೀಯಲ್ಲಾ. ಸುಳ್ಳು ಅನ್ನೋದು "creativity ಯ ತಾಯಿ" ಕಣಮ್ಮ. ನಾನ್ ಪ್ರತಿ ಸಲ ಸುಳ್ಳು ಹೇಳಕ್ಕೆ ಎಷ್ಟು ಕಷ್ಟ ಪಡ್ತೀನಿ ಅನ್ನೋದು ನಿನಗೇನು ಗೂತ್ತು? ಎಲ್ಲಿ ಇಷ್ಟೆಲ್ಲಾ ಮಾತಾಡ್ತಿಯಲ್ಲಾ ನೀನು ಈಗೊ೦ದು ಸುಳ್ಳು ಹೇಳು ನೋಡೋಣ...

 "ನ೦ಗೊತ್ತಿಲ್ಲಾ" ಎ೦ದಳು ಅಮ್ಮ, Just ಮಾತ್ ಮಾತಲ್ಲಿ.